ಸೇವೆಗಳು
Main image
ದೇವಸ್ಥಾನದ ಹಿನ್ನೆಲೆ

ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯವು ಮುಜರಾಯಿ ಇಲಾಖೆಗೆ ಒಳಪಟ್ಟಿರುತ್ತದೆ .ಈ ದೇವಾಲಯವು ಬೆಂಗಳೂರು (ಉ) ಗ್ರಾಮಾಂತರ ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿ ,ಬನ್ನಿಮಂಗಲ ಗ್ರಾಮದಲ್ಲಿ ನೆಲೆಸಿರುವ ಸ್ವಾಮಿಯು ಸರಿ ಸುಮಾರು ಒಂದು ಎಕರೆ ವಿಸ್ತೀರ್ಣದಲ್ಲಿ ಕಲ್ಲಿನ ಕಟ್ಟಡ ಹಾಗೂ ರಾಜಗೋಪುರದಿಂದ ನಿರ್ಮಿಸಲಾಗಿದ್ದು,ಎಳ್ಳಿನ ಪಾವಿತ್ರತೆಯು ಹಾಗೂ ದೇವ ಸಾನಿದ್ಯವು ಅತಿ ಸರಳ ಸ್ಥಳಗಳಲ್ಲಿ ಕಾಣಬಹುದಾಗಿದೆ.

ಈ ದೇವಾಸ್ಥಾನವು ಪೂರ್ವಾಭಿಮುಖವಾಗಿ ಗ್ರಾಮದ ಮುಂಭಾಗದಲ್ಲಿದ್ದು,ದೇವಾಲಯದ ಹಿಂಭಾಗದಲ್ಲಿ ಬಹು ದೊಡ್ಡ ಕೆರೆ ಇದ್ದು ದೇವಾಲಯದ ದಕ್ಷಿಣ ದಿಕ್ಕಿನಲ್ಲಿ ಅರ್ಧ ಪರ್ಲಾಂಗ್ ನಡೆದರೆ ನೂರಾರು ಕಲಿನ್ನ ನಾಗದೇವತೆಗಳು ಮತ್ತು ಅರಳಿ ವೃಕ್ಷವನ್ನು ಕಾಣಬಹುದಾಗಿದೆ.

ದೇವಸ್ಥಾನದ ಹಿನ್ನೆಲೆ ಸಂಪರ್ಕಿಸಿ
ಅಲಂಕಾರಗಳು
ಬೆಣ್ಣೆ ಅಲಂಕಾರ, ಅರಿಶಿನ ಅಲಂಕಾರ, ಗಂಧಾಲಂಕಾರ, ವಿಳೆದೆಲೆ ಅಲಂಕಾರ, ಕೊಬ್ಬರಿ ಅಲಂಕಾರ, ಚಂದನ ಅಲಂಕಾರ, ಹೂವಿನ ಅಂಲಂಕಾರ, ತರಕಾರಿ ಅಲಂಕಾರ ಮತ್ತು ಇನ್ನೂ ಮುಂತಾದ ಅಲಂಕಾರಗಳನ್ನು ಮಾಡಿಸಬಹುದು.
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ
ಬನ್ನಿಮಂಗಲ, ಕುಂದಾಣ ಹೋಬಳಿ,
ಆಲೂರು ದುದ್ದನಹಳ್ಳಿ (ಅಂಚೆ),
ಬೆಂಗಳೂರು ಗ್ರಾಮಾಂತರ-562110
ಪ್ರತಿ ದಿನ ಬೆಳಗ್ಗೆ 8.00 ರಿಂದ ಸಂಜೆಯವರೆಗೂ